ಆಮಸ್ಟ್, ಲಾರ್ಡ್
(1772-1857). ಐದು ವರ್ಷಗಳ ಕಾಲ (1823-1828) ಭಾರತದಲ್ಲಿ ಗವರ್ನರ್-ಜನರಲ್ ಆಗಿದ್ದ. ಇಂಗ್ಲೆಂಡಿನಲ್ಲಿ ಶ್ರೀಮಂತ ಮನೆತನದಲ್ಲಿ ಹುಟ್ಟಿ ಕೆಲಕಾಲ ಸೈನಿಕನಾಗಿ ಕೆಲಸ ಮಾಡಿ ಬ್ರಿಟಿಷ್ ಸರ್ಕಾರದ ಆದೇಶದ ಮೇಲೆ 1816ರಲ್ಲಿ ಚೀನ ದೇಶಕ್ಕೆ ಬಂದು ರಾಜಕೀಯ ನಿಯೋಗದ ಸದಸ್ಯನಾಗಿ ಹೋಗಿದ್ದ. ತಿರುಗಿ ಬರುವಾಗ ಸೇಂಟ್ ಹೇಲಿನ್ ದ್ವೀಪದಲ್ಲಿಳಿದು, ನೆಪೋಲಿಯನ್ ಚಕ್ರವರ್ತಿಯ ಸಂಗಡ ದೀರ್ಘಸಂಭಾಷಣೆ ನಡೆಸಿದ. ಮೊದಲನೆಯ ಬರ್ಮಾ ಯುದ್ಧ (1824) ಇವನ ಕಾಲದಲ್ಲಿ ನಡೆದ ಮುಖ್ಯ ಘಟನೆ. ಈ ಯುದ್ಧದಿಂದ ಅರೆಕಾನ್ ಮತ್ತು ತೇನಾಸರೀಮ್‍ಗಳ ಮೇಲೆ ಬ್ರಿಟಿಷ್ ಪ್ರಭುತ್ವ ಏರ್ಷಟ್ಟಿತು. 1826ರಲ್ಲಿ ಲಾರ್ಡ್ ಪದವಿಯನ್ನು ಪಡೆದು 1828ರಲ್ಲಿ ಇಂಗ್ಲೆಂಡಿಗೆ ಮರಳಿದ.
(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ